Site icon NEWS ಚಂದನ

Bangalore Metro: ₹15,600 ಕೋಟಿ ಮೌಲ್ಯದ ಬೆಂಗಳೂರು ಮೆಟ್ರೋದ ಹಂತ-3ಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಅನುಮೋದನೆ

Inside an empty coach of Kanpur Metro.

Inside an empty coach of Kanpur Metro. by Hardeep Asrani is licensed under CC-CC0 1.0

Bangalore Metro: ₹15,600 ಕೋಟಿ ಮೌಲ್ಯದ ಬೆಂಗಳೂರು ಮೆಟ್ರೋದ ಹಂತ-3ಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಅನುಮೋದನೆ ದೊರೆತಿದೆ.

44.65 ಕಿ.ಮೀ ಉದ್ದದ ಯೋಜನೆಗೆ ಟೆಂಡರ್ ಪ್ರಕ್ರಿಯೆಗೆ ಮುಂದಾಗಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ (ಬಿಎಂಆರ್‌ಸಿಎಲ್) ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ.ಆದರೆ ಮುಂಬರುವ ಎಲ್ಲಾ ಮೆಟ್ರೋ ಯೋಜನೆಗಳಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಸೂಚಿಸಿರುವ ಹೊಸ ಪ್ರಸ್ತಾವನೆಯು ಈ ಯೋಜನೆಗೆ ತಡೆಯಾಗುತ್ತಿದೆ.

 

44 ಕಿಮೀ ಉದ್ದದ ಹಾಗೂ 31 ನಿಲ್ದಾಣಗಳನ್ನು ಒಳಗೊಂಡಿರುವ ನಮ್ಮ ಮೆಟ್ರೋ ಹಂತ 3 ,ಜೆಪಿ ನಗರ 4ನೇ ಹಂತ, ಹೊಸಹಳ್ಳಿ ಮತ್ತು ಕಡಬಗೆರೆ ಸಂಪರ್ಕಿಸುವ ಮಾರ್ಗವಾಗಿದೆ. ಇದು ಬೆಂಗಳೂರು ದಕ್ಷಿಣದಲ್ಲಿ ನಗರ ಚಲನಶೀಲತೆಗೆ ದೊಡ್ಡ ಉತ್ತೇಜನ ನೀಡಲಿದೆ.ಯೋಜನೆ ಮಂಜೂರಾದ ದಿನಾಂಕದಿಂದ 5.5 ವರ್ಷಗಳ ಗಡುವನ್ನು ಹೊಂದಿದೆ ಎಂದು BMRCL ಹೇಳಿದೆ. “ಆದಾಗ್ಯೂ, ಡಬಲ್ ಡೆಕ್ಕರ್ ಫ್ಲೈಓವರ್‌ಗಳ ನಿರ್ಮಾಣವು ಈಗ ಗಡುವನ್ನು ಇನ್ನೂ ಒಂದು ವರ್ಷ ತಳ್ಳುತ್ತದೆ” ಎಂದು ಹೇಳಿದೆ.

 

 

 

 

 

Exit mobile version