Site icon NEWS ಚಂದನ

Budget 2024: ದಿನಾಂಕ, ಪ್ರಮುಖ ಸಮಯಗಳು ಮತ್ತು ಬಜೆಟ್ ಭಾಷಣದ ನಿರೀಕ್ಷೆಗಳು

Sitharaman, FM Sitharaman

Budget 2024: 2024 ರ ಬಜೆಟ್ ನಿರ್ಮಲಾ ಸೀತಾರಾಮನ್ ಅವರ ಸತತ ಏಳನೇ ಬಜೆಟ್ ಆಗಿದ್ದು 1959 ರಿಂದ 1964 ರವರೆಗೆ ಸತತ ಐದು ಪೂರ್ಣ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮೀರಿಸುತ್ತದೆ.

Budget 2024: ಪ್ರಮುಖ ಅಂಶಗಳು

ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭಗೊಂಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಜುಲೈ 23, 2024 ರಂದು ಮಂಡಿಸಲಿದ್ದಾರೆ.

ಇದು 1959 ರಿಂದ 1964 ರವರೆಗೆ ಸತತ ಐದು ಪೂರ್ಣ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮೀರಿಸುವ ಮೂಲಕ ಅವರ ಸತತ ಏಳನೇ ಬಜೆಟ್ ಮಂಡನೆ ಎಲ್ಲರ ಗಮನ ಸೆಳೆಯುತ್ತಿದೆ.

ಭಾರತದ ಮೊದಲ ಪೂರ್ಣ ಅವಧಿಯ ಮಹಿಳಾ ಹಣಕಾಸು ಸಚಿವರಾಗಿ 2019 ರಿಂದಸೇವೆ ಸಲ್ಲಿಸಿದ ನಿರ್ಮಲಾ ಸೀತಾರಾಮನ್ ಅವರು ಜುಲೈ 23 ರಂದು ಬೆಳಿಗ್ಗೆ 11:00 ಗಂಟೆಗೆ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ

ಈ ಕೇಂದ್ರ ಬಜೆಟ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರದ ಮೂರನೇ ಸತತ ಅವಧಿಯಲ್ಲಿನ(Modi 3.0) ಮೊದಲ ಪೂರ್ಣ ಹಣಕಾಸು ಬಜೆಟ್ ಆಗಿರುತ್ತದೆ.

2024-25 ರ ಯೂನಿಯನ್ ಬಜೆಟ್ ಮುಖ್ಯವಾಗಿ ಎಲ್ಲಾ ವಿಭಾಗಗಳಲ್ಲಿ ತೆರಿಗೆದಾರರಿಗೆ ಲಾಭದಾಯಕವಾಗುವಂತೆ ಆದಾಯ ತೆರಿಗೆ ರಚನೆಯಲ್ಲಿನ ಬದಲಾವಣೆಗಳ ಮೇಲೆ ಮತ್ತು ಭಾರತದಲ್ಲಿ ಸುಲಭವಾಗಿ ವ್ಯಾಪಾರ ಮಾಡುವ ಕಡೆ ಬೆಳಕು ಚೆಲ್ಲಲಿದೆ.

2024 ರ ಬಜೆಟ್ ಮಂಡನೆಯ ಮುನ್ನಾದಿನದಂದು, ಪ್ರಧಾನಿ ನರೇಂದ್ರ ಮೋದಿ ಹೇಳಿದರು: “60 ವರ್ಷಗಳ ನಂತರ, ಸರ್ಕಾರವು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು, ಮೂರನೇ ಬಾರಿಗೆ ಮೊದಲ ಬಜೆಟ್ ಅನ್ನು ಮಂಡಿಸುವುದು ಹೆಮ್ಮೆಯ ವಿಷಯವಾಗಿದೆ. ನಾನು ದೇಶದ ಜನರಿಗೆ ಭರವಸೆಗಳನ್ನು ನೀಡುತ್ತಿದ್ದೇನೆ ಮತ್ತು ಇದನ್ನು ನೆರವೇರಿಸುವುದು ನಮ್ಮ ಧ್ಯೇಯವಾಗಿದೆ. ಈ ಬಜೆಟ್ ಅಮೃತ್ ಕಾಲದ ಪ್ರಮುಖ ಬಜೆಟ್ ಆಗಿದೆ ಮತ್ತು ಇಂದಿನ ಬಜೆಟ್ ನಮ್ಮ ಅಧಿಕಾರಾವಧಿಯ ಮುಂದಿನ 5 ವರ್ಷಗಳ ದಿಕ್ಕನ್ನು ನಿರ್ಧರಿಸುತ್ತದೆ ಹಾಗು ಈ ಬಜೆಟ್ ನಮ್ಮ ಕನಸಿನ “ವಿಕ್ಷಿತ್ ಭಾರತ್‌”ಗೆ ಬಲವಾದ ಅಡಿಪಾಯವಾಗಲಿದೆ.

Exit mobile version