Site icon NEWS ಚಂದನ

Paris Olympics 2024 : ಮನು ಭಾಕರ್ ಫೈನಲ್ ಗೆ ಪ್ರವೇಶ,ಭಾರತ ಗೆಲ್ಲಬಹುದೇ ಮೊದಲ ಪದಕ…?

Olympic rings Paris, 23 September

Paris Olympics 2024 :22ರ ಹರೆಯದ ಭಾಕರ್ 600 ಅಂಕಗಳಿಗೆ 580 ಅಂಕ ಗಳಿಸಿ ಅರ್ಹತಾ ಸುತ್ತಿನಲ್ಲಿ 3 ನೇ ಸ್ಥಾನ ಪಡೆದರು. ಇದರಲ್ಲಿ ಹಂಗೇರಿಯ ಏಸ್ ವೆರೋನಿಕಾ ಮೇಜರ್ 582 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು.

ಅತ್ಯಧಿಕ ಸಂಖ್ಯೆಯ ಪರಿಪೂರ್ಣ ಸ್ಕೋರ್‌ಗಳನ್ನು (27) ಶೂಟ್ ಮಾಡುವುದರೊಂದಿಗೆ ಮನು ಭಾಕರ್ ಫೈನಲ್ ಗೆ ಅರ್ಹತೆ ಪಡೆದರು.ಒಟ್ಟು 45 ಶೂಟರ್ ಗಳು ಭಾಗವಹಿಸಿದ್ದ ಅರ್ಹತಾ ಸುತ್ತಿನಲ್ಲಿ 580 ಅಂಕಗಳನ್ನು ಗಳಿಸಿ ಭಾಕರ್ ಮೂರನೇ ಸ್ಥಾನ ಗಳಿಸಿದರೆ, ಅದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಇನ್ನೋರ್ವ ಶೂಟರ್ ರಿದಮ್ ಸಾಂಗ್ವಾನ್ 15ನೇ ಸ್ಥಾನ ಪಡೆದು ಫೈನಲ್​ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಇದಕ್ಕೂ ಮುನ್ನ ಸರಬ್ಜೋತ್ ಸಿಂಗ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರು ಕ್ರಮವಾಗಿ 9 ಮತ್ತು 18ನೇ ಸ್ಥಾನ ಪಡೆದು ಪುರುಷರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು.ಫೈನಲ್ ಪಂದ್ಯವು ನಾಳೆ  ಅಂದರೆ ಜುಲೈ 28 ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ನಡೆಯಲಿದೆ. ಪಂದ್ಯದ ನೇರ ಪ್ರಸಾರವನ್ನು ಡಿ ಡಿ ಸ್ಪೋರ್ಟ್ಸ್ jio ಸಿನಿಮಾ ದಲ್ಲಿ ವೀಕ್ಷಿಸಬಹುದಾಗಿದೆ

 

 

Exit mobile version